Back to home
Midnight Train Blues
Acoustic

Midnight Train Blues

B
Basavaraj Doddamani
0 likes1 plays3:21
Style: folk, acoustic guitar, vocals, harmonica, 95 bpm, storytelling, authentic, warm, male vocal, Soulful vocals, sad
Learn to sing thisKaraoke with live pitch — get a score on every lineSing →

PRO & Creator Features

Unlock advanced AI features with Pro (Audio2Audio, Voice Clone, Photo Covers, LoRA) or Creator (Variations, Edit Sections, Stem Separation).

Audio2Audio Remix

Pro & Creator

Voice Clone

Pro & Creator

Create Variations

Creator only

Edit Sections

Creator only

Stem Separation

Creator only

Lyrics

▶ Play this song to follow along.

ಕೋಟಿ ಕೋಟಿ ಗಳಿಸಿ ಕೊಡಿಯಿಟ್ಟೆಣ್ಣಾ, ಮಲಗಿದ್ರ ನಿದ್ದಿ ಮರತಬಿಟ್ಟೆಣ್ಣಾ, ಕಾಲ ಬಂದಾಗ ವೇಳಿ ನೋಡಾಕ ಬರೊಲ್ಲಣ್ಣಾ, ಮಣ್ಣಿನ ಕಾಯಾ ಮಣ್ಣಿಗೇ ಸೇರಿಬಿಡುತ್ತಲ್ಲಣ್ಣಾ, ಮೂರು ದಿನದ ಬದುಕಿನಾಗ ಯಾಕಿಷ್ಟು ಅಹಂಕಾರಣ್ಣಾ?

ಮೋಸ ಮಾಡಿ ಆಸ್ತಿ ಮಾಡಿಯಣ್ಣಾ, ದೊಡ್ಡ ಮನುಷ್ಯ ಅಂತ ಮೆರಿಬ್ಯಾಡಣ್ಣಾ, ಹಸಿದವನಿಗೆ ತುತ್ತು ಕೊಡಣ್ಣಾ, ಬಡವರ ಕಣ್ಣೀರು ಒರೆಸಣ್ಣಾ, ಕೊನೆಗಾಲದಾಗ ನಿನ್ನ ಸಂಪತ್ತು, ನಿನ್ನ ಹೆಜ್ಜೆ ಜೊತೆಗೆ ಬರೊಲ್ಲಣ್ಣಾ!

ಕೋಟಿ ಕೋಟಿ ಗಳಿಸಿ ಕೊಡಿಯಿಟ್ಟೆಣ್ಣಾ, ಮಲಗಿದ್ರ ನಿದ್ದಿ ಮರತಬಿಟ್ಟೆಣ್ಣಾ, ಕಾಲ ಬಂದಾಗ ವೇಳಿ ನೋಡಾಕ ಬರೊಲ್ಲಣ್ಣಾ, ಮಣ್ಣಿನ ಕಾಯಾ ಮಣ್ಣಿಗೇ ಸೇರಿಬಿಡುತ್ತಲ್ಲಣ್ಣಾ!

ಅಣ್ಣ ತಮ್ಮರ ಜಗಳ ಯಾಕಣ್ಣಾ, ಆಸ್ತಿ ಗಲಾಟಿ ಬ್ಯಾಡಣ್ಣಾ, ಒಂದೇ ತಾಯಿಯ ಮಕ್ಕಳಣ್ಣಾ, ಯಾಕಿಷ್ಟು ಕಿತ್ತಾಡತೀರಣ್ಣಾ? ನಾಲ್ಕು ಮೊಳದ ಬಟ್ಟೆ ಬೇಕಣ್ಣಾ, ಮಲಗಾಕ ಆರು ಅಡಿ ಸಾಕಣ್ಣಾ, ಪ್ರೀತಿಯಿಂದ ಬಾಳಬೇಕಣ್ಣಾ, ಬಾಳಿದರ ಬಾಳು ಬಂಗಾರವಣ್ಣಾ!

ಕೋಟಿ ಕೋಟಿ ಗಳಿಸಿದರೂ ಹೊಟ್ಟಿಗೆ ಬೇಕು ರೊಟ್ಟಿಯಣ್ಣಾ, ರಾಜನಾದರೂ ಬಡವನಾದರೂ ಕೊನೆಗೆ ಮಣ್ಣಿನ ಗಟ್ಟಿಯಣ್ಣಾ, ಸಂಬಂಧಿಕರು ಅಳತಾರ ನೋಡಣ್ಣ, ಆಸ್ತಿ ಪಾಲಿಗೆ ಬಂದು ನಿಲ್ಲತಾರ ನೋಡಣ್ಣ, ಯಮನ ಕರೆಗೆ ಹೊರಟ ಮ್ಯಾಲೆಣ್ಣ, ಯಾರಿಗೆ ಯಾರು ಇಲ್ಲವಣ್ಣಾ!

ಯೌವನದಾಗ ಮೈಯ ಬಲವಣ್ಣ, ಮೀಸೆ ತಿರುವಿ ಮೆರೆದಿ ಛಲವಣ್ಣ, ವಯಸ್ಸು ಬಂದಾಗ ಕೋಲು ಹಿಡಿಬೇಕಣ್ಣ, ಹೆಜ್ಜೆ ಇಡಲೂ ಕಷ್ಟಪಡಬೇಕಣ್ಣ. ನಿನ್ನ ಮಾತಿಗೆ ಊರು ನಡುಗಿತಣ್ಣ, ನಿನ್ನ ಹೆಸರಿಗೆ ಜನ ಹೆದರಿತಣ್ಣ, ಕಾಲದ ಮುಂದೆ ನಿನ್ನ ಆಟಣ್ಣ, ಒಂದೊಂದಾಗಿ ಮುಗಿದು ಹೋಯಿತಣ್ಣ!

ಇರುವಾಗಲೇ ಒಳ್ಳೇದು ಮಾಡಣ್ಣಾ, ಪರರ ಕಷ್ಟಕೆ ಮಿಡಿಯಣ್ಣಾ, ಹಸಿದ ಬಡವನ ಹೊಟ್ಟೆ ತುಂಬಿಸಣ್ಣಾ, ಅದೇ ಪುಣ್ಯದ ಕೆಲಸಣ್ಣಾ. ದೇವರ ಹೆಸರ ನೆನೆದು ಬಾಳಣ್ಣಾ, ಸತ್ಯದ ದಾರಿಯ ಹಿಡಿಯಣ್ಣಾ, ಹೋದ ಮೇಲೂ ಜನ ನೆನೆಯಬೇಕಣ್ಣಾ, ಪ್ರೀತಿಯ ಬೀಜ ಬಿತ್ತಿಹೋಗಣ್ಣಾ!

ಕೋಟಿ ಕೋಟಿ ಗಳಿಸಿ ಕೊಡಿಯಿಟ್ಟಿ, ಮಲಗಿದ್ರ ನಿದ್ದಿ ಮರತಬಿಟ್ಟಿ, ಕಾಲ ಬಂದಾಗ ವೇಳಿ ನೋಡಾಕ ಬರೊಲ್ಲಾ, ಮಣ್ಣಿನ ಕಾಯಾ ಮಣ್ಣಿಗೇ ಸೇರಿಬಿಡುತ್ತಲ್ಲಾ, ಒಳ್ಳೇತನವ ಮಾಡಿ ಹೋಗಣ್ಣಾ,

Comments(0)

Sign in to join the conversation.

No comments yet. Be the first to comment!