
PRO & Creator Features
Unlock advanced AI features with Pro (Audio2Audio, Voice Clone, Photo Covers, LoRA) or Creator (Variations, Edit Sections, Stem Separation).
Audio2Audio Remix
Pro & Creator
Voice Clone
Pro & Creator
Create Variations
Creator only
Edit Sections
Creator only
Stem Separation
Creator only
Lyrics
▶ Play this song to follow along.
ಜಗದ ಜೀವದ ಜೀವದಾತ,
ಕಾಣುವ ದೇವರು ಈ ಅನ್ನದಾತ!
ನಿನಗೇ ಬೆಲೆ ಇಲ್ಲದಂತಾಯಿತಾ?!
ನಿನ್ನ ಬದುಕು ಬವಣೆಯಾಯಿತಾ?!
ಬೆಳೆದ ಬೆಳೆಗೆ ಸರಿ ಬೆಲೆ ಇಲ್ಲದಾಯಿತ?
ಒಂದು ತುತ್ತಿನ ನೆಮ್ಮದಿ ಇಲ್ಲದಂತಾಯಿತ!
ಇದ್ದಿಯೋ ಇಲ್ಲೋ ಯಪ್ಪ ನೀ ಭಗವಂತ!
ನಿಮ್ಮ ನಿಮ್ಮದಕೆಲ್ಲಾ ನಿಮದ ರೇಟ
ಇಳೆಯ ನಂಬಿದವಗೆ ಬರದ ಕಾಟ
ದುಡಿಯಂವ ದುಡಿದಿದ್ದರ ನಮಗೆಲ್ಲಿ ಊಟ..
ಯಾರು ಬಲ್ಲವರೋ ಈ ದೇವ್ರಾ ಆಟ..
ಸಾಲದ ಸುಳಿಯಲ್ಲಿ ಸಿಲುಕಿದ ಜೀವ,
ಕಣ್ಣೀರ ಹನಿಯಲಿ ಮುಳುಗಿದ ಭಾವ,
ದೇಶದ ಹೊಟ್ಟೆಯ ತುಂಬಿಸುವ ನಿನಗೆ,
ದಿನದಿನದ ಚಿಂತೆ ಒಂದೇ ಉಳಿವುದು ಕೊನೆಗೆ?!
ಪ್ರತಿ ಜೀವದ ಜೀವದಾತ,
ಧರೆಯ ದೇವರು ಈ ಅನ್ನದಾತ!
ನಿನಗೇ ಬೆಲೆ ಇಲ್ಲದಂತಾಯಿತಾ?!
ನಿನ್ನ ಬದುಕು ಬವಣೆಯಾಯಿತಾ?!
ಬಿಸಿಲಿನ ಬೇಗೆ ಮೈಯನು ಸುಟ್ಟರೂ,
ಚಳಿಯಲಿ ನಡುಗುವ ರಾತ್ರಿ ಕಳೆದರೂ,
ಅವನ ಗೋಳು ಕೇಳೋರ್ಯಾರು...
ಇದನ ತಡಿಯಾಕ ಬರಾಂವ ಯಾವ ದೇವರು...
ನಿನ್ನ ಬೆವರಿನ ಹನಿಯೇ ಮುತ್ತು,
ನಿನ್ನ ಕಾಯಕವೇ ಜಗಕೆ ಸೊತ್ತು,
ನಿನ್ನಿಂದಲೇ ಈ ಬದುಕಿನ ಬೆಳಕು,
ನಿನಗೇಕೆ ಸಿಗದು ನೆಮ್ಮದಿಯ ಬದುಕು?!
ಜಗದ ಜೀವದ ಜೀವದಾತ,
ಕಾಣುವ ದೇವರು ಈ ಅನ್ನದಾತ!
ನಿನಗೇ ಬೆಲೆ ಇಲ್ಲದಂತಾಯಿತಾ?!
ನಿನ್ನ ಬದುಕು ಬವಣೆಯಾಯಿತಾ?!
ಹಬ್ಬದ ದಿನದಲಿ ಮನೆಯಲಿ ದೀಪ,
ರೈತನ ಮನದಲಿ ನೋವಿನ ಕೂಪ,
ಎಲ್ಲರ ಮನೆಯಲಿ ಅನ್ನದ ಸಡಗರ,
ರೈತನ ಮನೆಯಲಿ ಸಾಲದ ಒಡಲಗರ!
ಅರಮನೆಯ ಜನಕೆ ಐಷಾರಾಮಿ,
ರೈತನ ಬದುಕೇಕೆ ಕಣ್ಣೀರ ಸ್ವಾಮಿ?
ಅನ್ನವ ನೀಡುವ ಕೈಗಳ ನೋವನು,
ಕೇಳುವವರಿಲ್ಲವೇ ರೈತನ ಕೂಗನು?!
ಪ್ರತಿ ಜೀವದ ಜೀವದಾತ,
ಧರೆಯ ದೇವರು ಈ ಅನ್ನದಾತ!
ನಿನಗೇ ಬೆಲೆ ಇಲ್ಲದಂತಾಯಿತಾ?!
ನಿನ್ನ ಬದುಕು ಬವಣೆಯಾಯಿತಾ?!
ರೈತನು ಉಳಿದರೆ ದೇಶವು ಉಳಿಯುವುದು,
ರೈತನು ಬೆಳೆದರೆ ಜಗವು ನಗುವುದು,
ಮಣ್ಣಿನ ಮಗನಿಗೆ ಗೌರವ ನೀಡೋಣ,
ಅನ್ನದಾತನ ಬದುಕಿಗೆ ಬೆಳಕು ಹಚ್ಚೋಣ!
ಬೆಳೆದ ಬೆಳೆಗೆ ನ್ಯಾಯದ ಬೆಲೆ ಇರಲಿ,
ರೈತನ ಬದುಕಲಿ ನೆಮ್ಮದಿ ನೆಲೆಸಲಿ,
ರೈತನ ಕಣ್ಣೀರು ಮುತ್ತಾಗಿ ಬದಲಾಗಲಿ,
ಭಾರತದ ಮಣ್ಣಲಿ ಹಸಿರು ನಳನಳಿಸಲಿ!
ಪ್ರತಿ ಜೀವದ ಜೀವದಾತ,
ಧರೆಯ ದೇವರು ಈ ಅನ್ನದಾತ!
ನಿನಗೇ ಬೆಲೆ ಇಲ್ಲದಂತಾಯಿತಾ?!
ನಿನ್ನ ನೋವ ಕೇಳುವವರಿಲ್ಲವಾಯಿತಾ?!
ಅನ್ನದಾತನೇ ನಿನಗಿದೋ ನಮನ,
ನಿನ್ನ ಋಣ ತೀರದು ಈ ಜನ್ಮಜನ್ಮ!